ಮಮತಾ ವಿರುದ್ಧ ಬಿಜೆಪಿ ದೂರು.!


ಮಮತಾ ವಿರುದ್ಧ ಬಿಜೆಪಿ ದೂರು.!

 

ನವದೆಹಲಿ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಗೀತೆಯನ್ನು ಹಾಡುವಾಗ ಅರ್ಧಕ್ಕೆ ಕುಳಿತಿದ್ದಾರೆ. ಕುಳಿತೇ ಹಾಡಿದ್ದಾರೆ. ಈ ಮೂಲಕ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ, ಬಿಜೆಪಿ ದೂರು ನೀಡಿದೆ.

 

ಈ ಸಂಬಂಧ ಟ್ವಿಟ್ಟರ್ ನಲ್ಲಿ ದೂರಿನ ಪ್ರತಿಯನ್ನು ಹಾಕಿ ಪೋಸ್ಟ್ ಮಾಡಿರುವಂತ ಬಿಜೆಪಿಯ ಅಡ್ವಕೇಟ್ ವಿವೇಕಾನಂದ ಗುಪ್ತ, ಸಿಎಂ ಮಮತಾ ಬ್ಯಾನರ್ಜಿಯವರು ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಕುಳಿತುಕೊಂಡೇ ಮೊದಲು ಹಾಡೋದಕ್ಕೆ ಶುರು ಮಾಡಿದ್ದು, ಆನಂತರ ಸ್ವಲ್ಪ ಹೊತ್ತು ಎದ್ದು ನಿಂತು ಹಾಡಿದ್ದಾರೆ. ರಾಷ್ಟ್ರಗೀತೆ ಪೂರ್ಣವಾಗೋ ಮೊದಲೇ ಕುಳಿತು ಹಾಡಿದ್ದಾರೆ ಎಂದು ಹೇಳಿದ್ದಾರೆ.

ಹಾಗೇಯೆ ಈ ಮೂಲಕ ರಾಷ್ಟ್ರಗೀತೆಗೆ ಅವಮಾನ ತೋರಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರಿನಲ್ಲಿ ಆಗ್ರಹಿಸಿದ್ದಾರೆ.