ಕಮಲ್ ಅಭಿಮಾನಿಗಳಿಗೆ ಶುಭ ಸುದ್ದಿ.!


ಕಮಲ್ ಅಭಿಮಾನಿಗಳಿಗೆ ಶುಭ ಸುದ್ದಿ.!

ಚೆನ್ನೈ: ಹಿರಿಯ ನಟ ಕಮಲ್ ಹಾಸನ್ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಬಂದಿದ್ದು, ಕಮಲ್ ಕೋವಿಡ್ ಸೋಂಕಿನಿಂದ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಹಾಗೂ ಡಿಸೆಂಬರ್ 4 ರಿಂದ ಮತ್ತೆ ತಮ್ಮ ಕೆಲಸವನ್ನು ಆರಂಭಿಸಬಹುದು ಎಂದು ಅವರು ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಹಾಸ್ಪಿಟಲ್ ವೈದ್ಯರು ತಿಳಿಸಿದ್ದಾರೆ.

 

ಅಮೆರಿಕಾಕ್ಕೆ ಹೋಗಿಬಂದ ನಂತರ ಕರೊನಾದ ಲಕ್ಷಣಗಳು ತೋರಿಬಂದಿದ್ದ ಅವರಿಗೆ ನ.22 ರಂದು ಸೋಂಕು ದೃಢಪಟ್ಟಿತ್ತು. ಅಲ್ಪಪ್ರಮಾಣದ ಲಕ್ಷಣಗಳಿದ್ದ ಕಮಲ್‍ಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಹಾಗೂ ಡಿ.3 ರವರೆಗೆ ಪ್ರತ್ಯೇಕವಾಗಿರಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುಹಾಸ್ ಪ್ರಭಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಗೇಯೆ ಕೆಲಸದ ವಿಷಯಕ್ಕೆ ಬಂದರೆ, ಸದ್ಯಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನದ ತಮ್ಮ ಹೊಸ ಚಿತ್ರ ವಿಕ್ರಮ್‍ನಲ್ಲಿ ಕಮಲ್ ಪಾತ್ರ ನಿರ್ವಹಿಸುತ್ತಿದ್ದು, ಜೊತೆಗೆ ವಿಜಯ್ ಟೆಲಿವಿಷನ್‍ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ತಮಿಳ್ ಸೀಸನ್ 5 ರ ಹೋಸ್ಟ್ ಆಗಿದ್ದಾರೆ. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಟಿ ರಮ್ಯ ಕೃಷ್ಣನ್ ಬಿಗ್ ಬಾಸ್ ನಡೆಸಿಕೊಡುತ್ತಿದ್ದು, ಕಮಲ್‍ರ ಚೇತರಿಕೆಯ ನಂತರ ಶೋಗೆ ವಾಪಸಾಗುವ ನಿರೀಕ್ಷೆ ಇದೆ ಎಂದಿದ್ದಾರೆ.