ನಾಳೆಯಿಂದ ಎಲ್ಲಾ ಶಾಲಾ-ಕಾಲೇಜು ಬಂದ್.!


ನಾಳೆಯಿಂದ ಎಲ್ಲಾ ಶಾಲಾ-ಕಾಲೇಜು ಬಂದ್.!

 

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾತಾವರಣ ಹದಗೆಟ್ಟಿದ್ದು, ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಸುಪ್ರೀಂ ಛಾಟಿ ಏಟಿನ ನಂತರ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶುಕ್ರವಾರದಿಂದ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

 

ವಾಯು ಮಾಲಿನ್ಯದ ಹಿನ್ನಲೆಯಲ್ಲಿ ನವೆಂಬರ್ 13ರಿಂದ ಶಾಲೆ-ಕಾಲೇಜುಗಳು ಬಂದ್ ಆಗಿದ್ದವು. ಆದರೆ ನವೆಂಬರ್ 29ರಿಂದ ಮತ್ತೆ ಶಾಲೆ ಶುರುವಾಗಿತ್ತು. ಆದರೆ ಈಗ ನಾಳೆಯಿಂದ ಮತ್ತೆ ಶಾಲೆಗಳು ಮುಚ್ಚಲಿದ್ದು, ಮಾಲಿನ್ಯ ಹೆಚ್ಚಾದ ಕಾರಣ, ಶಾಲೆಗಳನ್ನು ಬಂದ್ ಮಾಡಲಾಗ್ತಿದೆ. ಹಾಗೂ ಮುಂದಿನ ಆದೇಶದವರೆಗೆ ಶಾಲೆ ಬಾಗಿಲು ತೆರೆಯುವುದಿಲ್ಲವೆಂದು ದೆಹಲಿ ಸರ್ಕಾರ ಹೇಳಿದೆ.

ಹಾಗೇಯೆ ಇದಕ್ಕೂ ಮುನ್ನ ಸಿಜೆಐ ಎನ್‍ವಿ ರಾಮನ್, ದೆಹಲಿ ಸರ್ಕಾರಕ್ಕೆ ಛೀಮಾರಿ ಹಾಕಿದ್ದು, ಮಾಲಿನ್ಯದ ಹೆಸರಿನಲ್ಲಿ ಸರ್ಕಾರಿ ನೌಕರರು ಮನೆಯಿಂದ ಕೆಲಸ ಮಾಡ್ತಿದ್ದಾರೆ. ಶಾಲೆ ಮಕ್ಕಳು ಏಕೆ ಶಾಲೆಗೆ ಬರ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಶಾಲೆ-ಕಾಲೇಜು ನಾಳೆಯಿಂದ ಮುಚ್ಚಲಿದ್ದು, ಆದರೆ ಪರೀಕ್ಷೆಗಳು ನಿಗದಿಯಂತೆ ನಡೆಯಲಿದೆ ಎಂದು ದೆಹಲಿಯ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.