ಯಾವುದೇ ಅಪಾಯವನ್ನೂ ಎದುರಿಸಲು ಭಾರತ್ ಸನ್ನದ್ದ.!


ಯಾವುದೇ ಅಪಾಯವನ್ನೂ ಎದುರಿಸಲು ಭಾರತ್ ಸನ್ನದ್ದ.!

 

ನವದೆಹಲಿ: ಭಾರತದ ಕಡಲ ಪ್ರದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಭಾರತೀಯ ನೌಕಾಪಡೆ ಸಂಪೂರ್ಣ ವಿಶ್ವಾಸ ಹೊಂದಿದೆ ಎಂದು ನೌಕಾಪಡೆಯ ಅಡ್ಮಿರಲ್ ಆರ್. ಹರಿಕುಮಾರ್ ಹೇಳಿದ್ದಾರೆ.

 

ಈ ಕುರಿತು ಮಾತನಾಡಿದ ಹರಿಕುಮಾರ್, ಪ್ರಸ್ತಾವಿತ ಸಮುದ್ರ ಕಮಾಂಡ್‍ಗೆ ಸಂಬಂಧಿಸಿದಂತೆ ಕೆಲಸ ನಡೆಯುತ್ತಿದ್ದು, ಅದರ ಮೂಲಭೂತ ರಚನೆ ಮುಂದಿನ ವರ್ಷದ ವೇಳೆಗೆ ಲಭ್ಯವಾಗಬಹುದು, ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯಕಟ್ಟಿನ ವೇದಿಕೆಗಳನ್ನು ಭಾರತ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಹಾಗೇಯೆ ಇದೇ ವೇಳೆ ಚೀನಾದ ಬಗ್ಗೆಯೂ ಮಾತನಾಡಿರುವ ಹರಿಕುಮಾರ್, ಹಿಂದೂ ಮಹಾಸಾಗರದಲ್ಲಿ ಚೀನಾ ಮುನ್ನುಗ್ಗುವ ಘಟನೆಗಳ ಬಗ್ಗೆ ನೌಕಾಪಡೆ ನಿಗಾ ವಹಿಸುತ್ತಿದೆ, ಅದರ ಚಟುವಟಿಕೆಗಳನ್ನು ಗಮನಿಸಲಾಗುತ್ತಿದೆ. ಉತ್ತರದ ಗಡಿಗಳಲ್ಲಿನ ಪರಿಸ್ಥಿತಿ ಹಾಗೂ ಕೋವಿಡ್-19 ರಾಷ್ಟ್ರಿಯ ಭದ್ರತೆಗೆ ಸಂಬಂಧಿಸಿದ ಸಂಕೀರ್ಣತೆಗಳನ್ನು ಹೆಚ್ಚಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಭದ್ರತಾ ಸವಾಲನ್ನು ಎದುರಿಸಲು ನೌಕಾ ಪಡೆ ಸರ್ವಸನ್ನದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.