ಸಿಎಎ ದೇಶವನ್ನು ವಿಭಜಿಸಲಿದೆ.!


ಸಿಎಎ ದೇಶವನ್ನು ವಿಭಜಿಸಲಿದೆ.!

 

ನವದೆಹಲಿ: ಪೌರತ್ವ ಕಾಯ್ದೆಯನ್ನು ಮೂಲಭೂತವಾಗಿ ರಾಷ್ಟ್ರ ವಿರೋಧಿ ಎಂದು ಕರೆದಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ಕಾಯ್ದೆ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯನ್ನಾಗಿಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ.

 

ಈ ಕುರಿತು ಮಾತನಾಡಿದ ಶಶಿ ತರೂರ್, ಸಿಎಎ ವಿಚಾರ ಬಂದಾಗ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಗೃಹ ಸಚಿವರನ್ನು ಆಕ್ಷೇಪಿಸಿದ್ದೇನೆ. ಯಾವುದೇ ಕಾನೂನು ನಿರ್ದಿಷ್ಟ ಸಮುದಾಯವನ್ನು ಗುರಿಯನ್ನಾಗಿ ಮಾಡಿಕೊಂಡರೆ ಅದು ಮೂಲಭೂತವಾಗಿ ರಾಷ್ಟ್ರ ವಿರೋಧಿಯಾಗಲಿದ್ದು, ಕೇಂದ್ರ ಸರ್ಕಾರ ಇದರ ಪ್ರಕ್ರಿಯೆ ಮಾಡಬಾರದು,. ಎರಡು ವರ್ಷದಿಂದ ಈ ಕಾನೂನು ಜಾರಿಗೊಳಿಸದಿರುವುದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.

ಹಾಗೇಯೆ ಯಾವುದನ್ನು ದಡ್ಡತನದಿಂದ ಮಾಡುವ ಮುನ್ನ ಯೋಚಿಸುತ್ತಾರೆ ಎಂಬ ವಿಶ್ವಾಸವಿದ್ದು, ಸಿಎಎ ದೇಶವನ್ನು ವಿಭಜಿಸಲಿದೆ. ದೇಶದ ಸೌಹಾರ್ದತೆಗೆ ಭಂಗ ತರುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ತಿಳಿಸಿದ್ದಾರೆ.