ಆಣೆ ಪ್ರಮಾಣದಿಂದ ಕೇಸ್ ಮುಗಿಯಲ್ಲ


ಆಣೆ ಪ್ರಮಾಣದಿಂದ ಕೇಸ್ ಮುಗಿಯಲ್ಲ

ಬೆಂಗಳೂರು: ವೆಂಕಟರವಣ ಸ್ವಾಮಿ ದೇವಸ್ಥಾನದಲ್ಲಿ ಆಣೆ ಪ್ರಮಾಣಕ್ಕೆ ನಾನು ಸಿದ್ದ. ತಿರುಪತಿಗೆ ಬರಬೇಕೆಂದರೆ ಅದಕ್ಕೂ ಸಿದ್ದ. ಈ ಚುನಾವಣೆಯಲ್ಲಿ ಆಣೆ ಪ್ರಮಾಣ ನೋಡುತ್ತಿದ್ದೇವೆ. ಆಣೆ ಪ್ರಮಾಣದಿಂದ ಕೇಸ್ ಮುಗಿಯಲ್ಲ ಎಂದು ವಿಶ್ವನಾಥ್ ಹೇಳಿದರು.

ಸಿಎಂ ಭೇಟಿ ಮಾಡಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಸಂಚು ಪ್ರಕರಣದಲ್ಲಿ ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಆಣೆ ಪ್ರಮಾಣಕ್ಕೆ ನಾನು ಸಿದ್ದನಿದ್ದೇನೆ. ಆದರೆ ತಿರುಪತಿಯಲ್ಲಿ ಗೋಪಾಲಕೃಷ್ಣಗೆ ರಕ್ಷಣೆಯಿಲ್ಲ. ನನಗೆ ಅಲ್ಲಿ ಅಭಿಮಾನಿಗಳಿದ್ದಾರೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು. ಕೊಲೆ ಸಂಚು ಪ್ರಕರಣದಲ್ಲಿ ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಗೋಪಾಲಕೃಷ್ಣ ಅವರನ್ನು ಇವತ್ತು ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆ ನಡೆಯುತ್ತಿದೆ, ಅದರ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದರು.

ನಾನು ನಿನ್ನೆಯಷ್ಟೇ ತಿರುಪತಿಗೆ ಹೋಗಿದ್ದೆ. ಆಂಧ್ರ ಪ್ರದೇಶದ ಹೆಸರು ಕೆಡಿಸುತ್ತಿದ್ದಾರೆ ನೋಡಿಕೊಳ್ಳುತ್ತೇವೆಂದು ಕೆಲವರು ಹೇಳಿದರು. ಅವನು ನನಗೆ ಗೊತ್ತಿರುವವನು ಬೇಡ ಬಿಡಿ ಎಂದೆ, ನಾನು ತಿರುಪತಿಗೆ ಬರಲು ಸಿದ್ಧ. ಆದರೆ ಅವನಿಗೆ ಆ ಜಾಗ ಸೇಫ್ ಅಲ್ಲ, ಅಲ್ಲಿ ಹೆಚ್ಚುಕಡಿಮೆ ಆದರೆ ನನ್ನ ಮೇಲೆ ಬರುತ್ತದೆ ಎಂದರು.