ಕಾಂಗ್ರೆಸ್ 15 ಸ್ಥಾನ ಗೆಲ್ಲುವುದು ಖಚಿತ.!


ಕಾಂಗ್ರೆಸ್ 15 ಸ್ಥಾನ ಗೆಲ್ಲುವುದು ಖಚಿತ.!

ಶಿವಮೊಗ್ಗ: ರಾಜ್ಯದಲ್ಲಿ ಜನ, ಅಧಿಕಾರಿಗಳು ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಭ್ರಷ್ಟ ಸರ್ಕಾರ ಇರಬೇಕೆ ಎಂದು ಕೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಜವಾಬ್ದಾರಿಯಿಂದ ಮತ ನೀಡಲಿದ್ದು, ಕಾಂಗ್ರೆಸ್ 15 ಸ್ಥಾನ ಗೆಲ್ಲುವುದು ಖಚಿತ ಎಂದಿದ್ದಾರೆ. ಹಾಗೂ ಈಶ್ವರಪ್ಪ ಸಿಎಂ ಬದಲಾವಣೆ ಎಂದು ಹೇಳಿದ್ದು, ಅವರು ಹೇಳಿದ ಮೇಲೆ ನಾನು ಏನು ಹೇಳಲಿ? ಹಿಂದೆಯೂ ಯಡಿಯೂರಪ್ಪ ವಿಷಯದಲ್ಲಿ ಹೀಗೆ ಮಾತು ಕೇಳಿ ಬಂದಿತ್ತು ಎಂದು ಹೇಳಿದ್ದಾರೆ.

ಹಾಗೇಯೆ ಡಿ.11ರಂದು ಬೆಲೆಯೇರಿಕೆ ವಿರುದ್ಧ ಪಕ್ಷದ ಪ್ರತಿಭಟನೆಯಿದ್ದು, ಇದರ ನಂತರ ಸದನದಲ್ಲಿ ರಾಜ್ಯದ ಭ್ರಷ್ಟಾಚಾರ ಹಾಗೂ ಹಗರಣ ಸೇರಿದಂತೆ ಇತರ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದ ಡಿಕೆ ಶಿವಕುಮಾರ್, ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಬಹಳಷ್ಟು ಜನ ಬರುವವರಿದ್ದಾರೆ ಎಂದು ಹೇಳಿದ್ದಾರೆ.