ಜನರು ಬದಲಾವಣೆ ಬಯಸುತ್ತಿದ್ದಾರೆ


ಜನರು ಬದಲಾವಣೆ ಬಯಸುತ್ತಿದ್ದಾರೆ

ಶಿವಮೊಗ್ಗ: ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ, ಈ ಕಾರಣದಿಂದ ರಾಜ್ಯದ ಜನರು ಅಧಿಕಾರಿಗಳು ಎಲ್ಲಾರೂ ಬದಲಾವಣೆ ಬಯಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಜವಾಬ್ದಾರಿಯಿಂದ ಮತ ನೀಡಲಿದ್ದಾರೆ. ಕಾಂಗ್ರೆಸ್ 15 ಸ್ಥಾನ ಗೆಲ್ಲುವುದು ಖಚಿತ ಎಂದರು.

ಈಶ್ವರಪ್ಪ ಸಿಎಂ ಬದಲಾವಣೆ ಎಂದು ಹೇಳಿದ್ದಾರೆ. ಅವರು ಹೇಳಿದ ಮೇಲೆ ನಾನು ಏನು ಹೇಳಲಿ? ಹಿಂದೆಯೂ ಯಡಿಯೂರಪ್ಪ ವಿಷಯದಲ್ಲಿ ಹೀಗೆ ಮಾತು ಕೇಳಿ ಬಂದಿತ್ತು ಎಂದರು. ಡಿ.11ರಂದು ಬೆಲೆಯೇರಿಕೆ ವಿರುದ್ಧ ಪಕ್ಷದ ಪ್ರತಿಭಟನೆಯಿದೆ. ಇದರ ನಂತರ ಸದನದಲ್ಲಿ ರಾಜ್ಯದ ಭ್ರಷ್ಟಾಚಾರ ಹಾಗೂ ಹಗರಣ ಸೇರಿದಂತೆ ಇತರ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದ ಡಿಕೆ ಶಿವಕುಮಾರ್, ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಬಹಳಷ್ಟು ಜನ ಬರುವವರಿದ್ದಾರೆ ಎಂದರು.