ರಸ್ತೆಯಲ್ಲೇ ಸೃಷ್ಟಿಯಾದ ಮಿನಿ ಜಲಪಾತ.!


ರಸ್ತೆಯಲ್ಲೇ ಸೃಷ್ಟಿಯಾದ ಮಿನಿ ಜಲಪಾತ.!

ಹಾಸನ: ರಾತ್ರಿಯಿಡೀ ಸುರಿದ ಭಾರೀ ಮಳೆಗೆ ರಸ್ತೆ ಕೊಚ್ಚಿ ಹೋಗಿ ರಸ್ತೆಯ ನಡುವೆಯೇ ಮಿನಿ ಜಲಪಾತ ಸೃಷ್ಟಿಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕು ಕೆಂಬಾಳು ಗ್ರಾಮದ ಬಳಿ ನಡೆದಿದೆ.

 

ಕೊಚ್ಚಿ ಹೋದ ರಸ್ತೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಸಂಚಾರ ಸ್ಥಗಿತವಾಗಿದೆ. ಭಾರೀ ಮಳೆಗೆ ಹಳ್ಳಕೊಳ್ಳಗಳು ತುಂಬಿದ್ದು, ತೋಟ ಹಾಗೂ ಜಮೀನಿನ ನೀರು ರಸ್ತೆ ಮೇಲೆ ಹರಿದಿದೆ. ಇದರ ಪರಿಣಾಮವಾಗಿ ರಸ್ತೆ ಕೊಚ್ಚಿ ಹೋಗಿದೆ. ಹಾಗೂ ತಾಲೂಕು ಕೇಂದ್ರಗಳಾದ ಚನ್ನರಾಯಪಟ್ಟಣ ಹಾಗೂ ತಿಪಟೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೇ ಕೊಚ್ಚಿಹೋಗಿದಕ್ಕೆ ಸಾರಿಗೆ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಹಾಗೇಯೆ ಭಾರೀ ಮಳೆಗೆ ಹಲವೆಡೆ ಮನೆಗೆ ನೀರು ನುಗ್ಗಿದೆ. ಅರಸೀಕೆರೆ ತಾಲೂಕಿನ ಅಗ್ಗುಂದ ತಾಂಡ್ಯದಲ್ಲಿ ಹಲವು ಮನೆಗೆ ನೀರು ನುಗ್ಗಿದ್ದು, ದಿನಸಿ ಸೇರಿ ಅಗತ್ಯ ವಸ್ತುಗಳು ನೀರಿಗಾಹುತಿಯಾಗಿವೆ. ಮತ್ತು ಅಗತ್ಯ ವಸ್ತು ಸಂರಕ್ಷಣೆ ಮಾಡಲು ಮನೆಯವರು ಪರದಾಡಿದ್ದು, ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಆರಂಭವಾಗಿರುವುದರಿಂದ ಸಮಸ್ಯೆ ಎದುರಾಗಿದೆ.