ಬಿಜೆಪಿಯವರು ಲಜ್ಜೆಗೆಟ್ಟವರು.!


ಬಿಜೆಪಿಯವರು ಲಜ್ಜೆಗೆಟ್ಟವರು.!

ಶಿವಮೊಗ್ಗ: ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಅವರ ಬ್ರೈನ್‍ಗೂ, ನಾಲಿಗೆಗೂ ಲಿಂಕ್ ಇಲ್ಲ. ಎನೇನೋ ಮಾತನಾಡುತ್ತಿರುತ್ತಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಪರಿಷತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ನಂಬಿಕೆಯಿಲ್ಲ. ಕಮಾಂಡೆಟಿ ಆಕ್ಟ್ ಬಗ್ಗೆ ಪ್ರಶ್ನೆ ಮಾಡಲು ಬಿಎಸ್.ವೈ ಹಾಗೂ ಬೊಮ್ಮಾಯಿಗೆ ಧಮ್? ಇಲ್ಲ. 75 ಸಾವಿರ ಕೋಟಿ ರೂ. ರಾಜ್ಯಕ್ಕೆ ಸಿಗ್ತಾ ಇತ್ತು. ಇದೀಗ 40 ಸಾವಿರ ಕೋಟಿ ರೂ. ಮಾತ್ರ ಬರ್ತಿದೆ. ನರೇಗಾ ಯೋಜನೆ ಮನಮೋಹನ್ ಸಿಂಗ್ ಜಾರಿಗೆ ತರದೆ ಇದ್ದರೆ, ಗ್ರಾ.ಪಂ ಸದಸ್ಯರಿಗೆ ಟೀ ಕುಡಿಯಲು ದುಡ್ಡು ಇರ್ತಿರಲಿಲ್ಲ. ನನ್ನ ಅಧಿಕಾರವಧಿಯಲ್ಲಿ ಮೂರು ಲಕ್ಷ ಮನೆ ಕಟ್ಟಿಸುತ್ತಿದ್ದೆ. ಈವರೆಗೆ 15 ಲಕ್ಷ ಮನೆ ಕಟ್ಟಿಸಿದ್ದೇನೆ.

ಈ ಸರ್ಕಾರದಲ್ಲಿ 40% ಲಂಚ ಕೊಡಬೇಕು ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಎಂತಹ ನಾಚಿಗೆಟ್ಟವರು ಇವರು, ಎಲ್ಲಾ ಇಲಾಖೆಯವರು 10 ರಿಂದ 15% ಕೊಡಬೇಕು. ಈಶ್ವರಪ್ಪ ಹತ್ತಿರ ಎಷ್ಟು ಪಸೆರ್ಂಟ್ ತೆಗೆದುಕೊಳ್ಳುತ್ತಾ ಇದ್ದಾರೆ ಎಂದು ಕೇಳಿ. ಇಲ್ಲ ಎಂದರೆ ಪಸೆರ್ಂಟೇಜ್ ಕೊಟ್ಟವರನ್ನು ಕರೆದು ತಂದು ನಿಲ್ಲಿಸುತ್ತೇನೆ..

ನನ್ನ ಅಧಿಕಾರಾವಧಿಯಲ್ಲಿ ಪಸೆರ್ಂಟೇಜ್ ತೆಗೆದುಕೊಂಡಿದ್ದೇನೆ ಎಂದರೆ ರಾಜಕೀಯ ಸನ್ಯಾಸತ್ವ ಪಡೆಯುತ್ತೇವೆ. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿ ಅಧಿಕಾರ ಪಡೆದರು. ಮುಂಬಾಗಿಲಿಂದ ಬರೋದು ಗೊತ್ತಿಲ್ಲ, ಯಾವಾಗಲೂ ಹಿಂಬಾಗಿಲಿಂದ ಬರ್ತಾರೆ. ಎಂಎಲ್‍ಎಗಳಿಗೆ 15-20 ಕೋಟಿ ರೂಪಾಯಿ ಕೊಟ್ಟು ಆಪರೇಷನ್ ಕಮಲ ಮಾಡಿದರು. ಬಿಜೆಪಿಯವರು ಲಜ್ಜೆಗೆಟ್ಟವರು, ದಯವಿಟ್ಟು ಅವರಿಗೆ ಮತ ಕೊಡಬೇಡಿ ಎಂದು ಕಿಡಿಕಾರಿದರು.