ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಗ್ನಿ ದುರಂತ.!


ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಗ್ನಿ ದುರಂತ.!

ಬೆಂಗಳೂರಲ್ಲಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅಗ್ನಿ ಅವಘಡ ಒಂದು ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಗ್ಯಾರೇಜ್ ಸುಟ್ಟು ಕರಕಲಾಗಿದೆ. ವಿವೇಕನಗರ ಮುಖ್ಯರಸ್ತೆಯ ವನ್ನಾರ್ ಪೇಟ್ ಬಳಿಯ ಕಾರು ಗ್ಯಾರೇಜ್ ನಲ್ಲಿ ಈ ಅವಘಡ ನಡೆದಿದೆ.

ಬೆಂಗಳೂರಿನ ವಿವೇಕನಗರ ಮುಖ್ಯರಸ್ತೆ ವನ್ನಾರ್ ಪೇಟ್ ಬಳಿಯ ನಾಸೀರ್ ಎಂಬುವರಿಗೆ ಸೇರಿದ ಕಾರು ಗ್ಯಾರೇಜ್ ನಲ್ಲಿ ತಡರಾತ್ರಿ ಅಗ್ನಿ ಅವಘಢ ಸಂಭವಿಸಿದೆ.ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದ್ದು, ಗ್ಯಾರೇಜ್ ನಲ್ಲಿದ್ದ 2 ಸಿಲಿಂಡರ್ ಸ್ಪೋಟಗೊಂಡಿದೆ. ಈ ವೇಳೆ ಗ್ಯಾರೇಜ್ ನಲ್ಲಿದ್ದ 3 ಬೈಕ್, 4 ಕಾರುಗಳು ಸುಟ್ಟು ಕರಕಲಾಗಿವೆ. ಗ್ಯಾರೇಜ್ ಪಕ್ಕದಲ್ಲಿದ್ದ ದೇವಸ್ಥಾನ, ಮನೆಗೆ ಸಣ್ಣಪುಟ್ಟ ಹಾನಿಯಾಗಿದೆ.

 

ಬೆಂಕಿ ಮಧ್ಯ 3 ಕಾರುಗಳನ್ನು ಮಾಲೀಕ ಹೊರತೆಗೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.